– ಒಂದು ಕಿರು ಪರಿಚಯ-
ಹೆಸರು: ಸುಷ್ಮಾ ಶಂಕರ್. ಎಸ್
ಜನನ: ಮೇ 1, 1971. ಕೇರಳದ ಕೊಲ್ಲಂ ಜಿಲ್ಲೆ.
ತಂದೆ-ತಾಯಿ: ಶ್ರೀ ಎನ್. ಚೆಲ್ಲಪ್ಪನ್ ನಾಯರ್ ಮತ್ತು ಶ್ರೀಮತಿ ಕೆ. ಸುಭಾಷಿಣಿಯಮ್ಮ
ಪತಿ: ಶ್ರೀ ಬಿ. ಶಂಕರ್
ಮಗ: ಚಂದನ್. ಎಸ್. ಎಸ್ (ಇಂಜಿನಿಯರಿಂಗ್ ವಿದ್ಯಾರ್ಥಿ).
ವಿದ್ಯಾಭ್ಯಾಸ: ಎಂ. ಎ (ಕನ್ನಡ), ಎಂ. ಫಿಲ್ (ಕನ್ನಡ), ಪಿ. ಹೆಚ್. ಡಿ (ಸಾರಾಲೇಖ ಮಂಡಿಸಲಾಗಿದೆ)
ವೃತ್ತಿ: 22 ವರ್ಷಗಳಿಂದ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಉಪ ವೃತ್ತಿ: ಪ್ರಧಾನ ಸಂಪಾದಕರು, “ತೊದಲ್ನುಡಿ” ಮಕ್ಕಳ ಸಾಹಿತ್ಯ ಮಾಸಿಕ.
ಸಾಹಿತ್ಯ ಕ್ಷೇತ್ರ: ಕನ್ನಡ – ಮಲಯಾಳಂ ಬರಹಗಾರ್ತಿ ಹಾಗೂ ಅನುವಾದಕಿ.
ಸಾಧನೆಗಳು:
1. “ಯುಗಶಬ್ಧಂ” (ಡಾ|| ದೊಡ್ಡರಂಗೇಗೌಡರ ‘ಯುಗವಾಣಿ’ ಕವನ ಸಂಕಲನದ ಮಲಯಾಳಂ ಅನುವಾದ) – 2010ರಲ್ಲಿ ಪ್ರಕಟಗೊಂಡಿತು.
2. “ಮೊದ ಮೊದಲ ಗೆರೆಗಳು” (ಇವರ 108 ಕನ್ನಡ ಕವನಗಳ ಸಂಕಲನ) – 2011ರಲ್ಲಿ ಪ್ರಕಟಗೊಂಡಿತು.
3. “ಅಮ್ಮ ದೈವಂ” (ಮಲಯಾಳಂ ಕವನ ಸಂಕಲನ) – 2012ರಲ್ಲಿ ಪ್ರಕಟಗೊಂಡಿತು.
4. “ಭೂಮಿಗೊಂದು ಚರಮಗೀತೆ” (‘ಜ್ಞಾನಪೀಠ’ ಪ್ರಶಸ್ತಿ ವಿಜೇತರಾದ ಶ್ರೀ ಒ.ಎನ್.ವಿ ಕುರುಪ್ ರವರ ‘ಭೂಮಿಕ್ಕು ಒರು ಚರಮಗೀತಂ’ ಇದರ ಕನ್ನಡ ಅನುವಾದ) – 2013ರಲ್ಲಿ ಪ್ರಕಟಗೊಂಡಿತು.
5. “ಆರ್ಧ್ರ ಸ್ನೇಹಂ” (ಮಲಯಾಳಂ ಕವನ ಸಂಕಲನ) – 2013ರಲ್ಲಿ ಪ್ರಕಟಗೊಂಡಿತು.
6. “ಅಕ್ಷರ”, (‘ಜ್ಞಾನಪೀಠ’ ಪ್ರಶಸ್ತಿ ವಿಜೇತರಾದ ಶ್ರೀ ಒ.ಎನ್.ವಿ ಕುರುಪ್ ರವರ ‘ಅಕ್ಷರಂ’ ಇದರ ಕನ್ನಡ ಅನುವಾದ) – ಹಸ್ತಪ್ರತಿಯಲ್ಲಿದೆ.
7. “ಅನ್ನ ಕೊಟ್ಟ ಕನ್ನಡ ಮಣ್ಣು” (ಕನ್ನಡ ಕವನ ಸಂಕಲನ) – ಹಸ್ತಪ್ರತಿಯಲ್ಲಿದೆ
8. “ಜ್ಞಾನ್ ಮಲಯಾಳಿ” (ಮಲಯಾಳಂ ಕವನ ಸಂಕಲನ) – ಪ್ರಕಟಣೆಯಲ್ಲಿದೆ
9. ಗೋಪಾಲಕೃಷ್ಣ ಅಡಿಗರು ಹಾಗೂ ಒ.ಎನ್.ವಿ. ಕುರುಪ್ ಅವರ ಬದುಕು-ಬರಹ ಎಂಬ ವಿಷಯದಲ್ಲಿ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದಿಂದ ಎಂ. ಫಿಲ್ ಪದವಿ ಪಡೆದಿದ್ದಾರೆ.
10. ದ್ರಾವಿಡ ಭಾಷಾ ಜ್ಞಾನಪೀಠ ಪುರಸ್ಕøತ ಕೃತಿಗಳು – ಒಂದು ಅಧ್ಯಯನ ಎಂಬ ವಿಷಯದಲ್ಲಿ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದಲ್ಲಿ ಪಿ. ಹೆಚ್. ಡಿ ಪದವಿಗಾಗಿ ಸಾರಾಲೇಖ ಮಂಡಿಸಿದ್ದಾರೆ